Thursday, December 30, 2010

ಫ್ರಾನ್ಸಿನ ಇನ್ಹ್ರಿಯ ಸಂಶೋಧನಾ ಸಂಸ್ಥೆಯಲ್ಲಿ PhD ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ

ಸಂಸ್ಥೆಯ ಬಗ್ಗೆ ಪರಿಚಯ

ಇನ್ರಿಯ (INRIA = National Institute for Research in Computer Science and Control) ಎನ್ನುವುದು ಸಂಗಣಕ ವಿಜ್ಞಾನ (computer science), ನಿಯಂತ್ರಣ ಸಿದ್ಧಾಂತ (control theory) ಹಾಗೂ ಅನ್ವಯಿಕ ಗಣಿತ (applied mathematics) ವಿಷಯಗಳಲ್ಲಿ ಸಂಶೋಧನೆ ನಡೆಸುವ ಫ್ರಾನ್ಸಿನ ಒಂದು ಸಂಸ್ಥೆ. ಅವರ ಜಾಲತಾಣ ಸಂದರ್ಶಿಸಲು ಈ ಕೊಂಡಿಯನ್ನು ಬಳಸಿ.

ಈ ಸಂಸ್ಥೆಗೆ ಫ್ರಾನ್ಸಿನ ಹಲವಾರು ಪ್ರದೇಶಗಳಲ್ಲಿ ಶಾಖೆಗಳಿವೆ. ಪ್ರತಿಯೊಂದು ಶಾಖೆಯಲ್ಲೂ ಹಲವಾರು ತಂಡಗಳು (research teams) ವಿವಿಧ ವಿಷಯಗಳಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆ ಮಾಡುತ್ತಿವೆ. ಫ್ರಾನ್ಸಿನಲ್ಲಿ ಹೆಚ್ಚಾಗಿ ಫ್ರೆಂಚ್ ಭಾಷೆಯ ಬಳಕೆ ತುಂಬಾ ಕಟ್ಟುನಿಟ್ಟಾಗಿ ಹೇರುತ್ತಿದ್ದರೂ, ಈ ಸಂಸ್ಥೆಯಲ್ಲಿ ಆಂಗ್ಲ ಭಾಷೆಯ ಬಳಕೆಗೆ ಅನುಮತಿಯಿದೆ. ಅದಲ್ಲದೆ ಇಲ್ಲಿಗೆ ಅರ್ಜಿ ಸಲ್ಲಿಸುವುದು ತುಂಬಾ ಸರಳ. ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಅಂತರ್ಜಾಲದ ಮೂಲಕ ನಿರ್ವಹಿಸಬಹುದು. GRE, TOEFL ಮೊದಲಾದ ದುಬಾರಿ ಪರೀಕ್ಷೆಗಳ ಅಗತ್ಯವೂ ಇಲ್ಲ. ಉಮೇದುವಾರರು ತಮ್ಮ ಮಂದಿಗನರಿಕೆಯನ್ನು (applicant's data = CV = biodata) ಅರ್ಜಿಸಲ್ಲಿಸುವ ಜಾಲಪುಟದಲ್ಲಿ (webpage) ನಕಲೇರಿಸಿದರೆ (upload) ಸಾಕು.

ಅರ್ಜಿ ಸಲ್ಲಿಸುವ ವಿಧಾನ
http://www.inria.fr/ ಪುಟಕ್ಕೆ ಹೋಗಿ. ಈ ಪುಟದಲ್ಲಿ ಕೆಳಗಡೆ 4 ಮನೆಗಳಿವೆ (columns). ಅವುಗಳಲ್ಲಿ ನಮಗೆ ಬೇಕಾದ್ದು ಈ ಮೂರು : Recrutement, Recherche, En région.

Recherche ಮನೆಯಲ್ಲಿ INRIA ದಲ್ಲಿ ಇರುವ research ತಂಡಗಳ (team) ಬಗ್ಗೆ ಮಾಹಿತಿ ಇದೆ. ಅದ್ಕೆ ಹೋದ್ರೆ http://www.inria.fr/recherches/domaines-de-recherche ಅಲ್ಲಿ ಕೆಳಗಡೆ 5 ವಿಭಾಗಗಳಲ್ಲಿ ಕೆಲಸ ಮಾಡುವ ತಂಡಗಳಿಗೆ ಕೊಂಡಿ ಸಿಗತ್ತೆ. ಮೊದಲನೆಯದ್ದು "Mathématiques appliquées, calcul et simulation" ನಂತರ ಇತರ ವಿಭಾಗಗಳು. ಅವುಗಳಲ್ಲಿ ಬಲಭಾಗದಲ್ಲಿ '+' ಚಿಹ್ನೆ ಒತ್ತಿದರೆ ಅದರೊಳಗಿರುವ ಉಪವಿಭಾಗಗಳು ನಂತರ ಪ್ರತಿಯೊಂದು ಉಪವಿಭಾಗದಲ್ಲಿರುವ ತಂಡಗಳು ಸಿಗುತ್ತವೆ. ನಿಮಗೆ ಆಸಕ್ತಿ ಇರುವ ವಿಷಯ ಉದಾ: image processing = ಬಿಂಬ ಪರಿಷ್ಕರಣೆಗೆ, ಸಂಬಂಧ ಪಟ್ಟ ತಂಡಗಳು ಹೆಚ್ಚಿನದ್ದು "Perception, cognition, interaction" ವಿಭಾಗದಲ್ಲಿ ಸಿಗುತ್ತವೆ. ಅದರಲ್ಲಿ ಹೋಗಿ ಯಾವ ಯಾವ ತಂಡಗಳು ಏನೇನು ಕೆಲಸ ಮಾಡುತ್ತಿವೆ ಎಂದು ನೋಡಬಹುದು. ಆ ತಂಡಗಳ ಮಾರ್ಗದರ್ಶಕರಿಗೆ (leads) ನೇರವಾಗಿ ಮಿಂಚೆ (ಮಿಂಚಿನ ಅಂಚೆ = email) ಕಳುಹಿಸಬಹುದು. ಕೆಲವರು ಪ್ರತಿಕ್ರಯಿಸುತ್ತಾರೆ.

En région ಮನೆಯಲ್ಲಿ INRIA ದ ವಿವಿಧ ಸಂಶೋಧನಾ ಕೇಂದ್ರಗಳನ್ನು (research centers) ಫ್ರಾನ್ಸಿನ ವಿವಿಧ ಪ್ರದೇಶಗಳಿಗೆ ಅನುಸರಿಸಿ ವಿಂಗಡಿಸಿದ್ದಾರೆ, Bordeaux, Grenoble ಆ ಥರ. ಆ ಕೊಂಡಿಗಳಿಗೆ ಹೋದರೆ ಆಯಾ ಪ್ರದೇಶಗಳಲ್ಲಿರುವ ತಂಡಗಳ ಬಗ್ಗೆ ಮಾಹಿತಿ ಪಡೆಯಬಹುದು. ಪ್ರಾದೇಶಿಕ ಮಾಹಿತಿಯಿಂದ ತುಂಬಾ ಉಪಯೋಗ ಏನಿಲ್ಲ. ಆದ್ರೆ ಯಾವುದಾದರು ತಂಡದಲ್ಲಿ ಉದ್ಯೋಗ ಸಿಕ್ಕಿದರೆ, ಅದು ಫ್ರಾನ್ಸಿನ ಯಾವ ಭಾಗದಲ್ಲಿದೆ ಎಂದು ತಿಳಿಯಲು ಅದನ್ನು ಸಂದರ್ಶಿಸಬಹುದು.

PhD ಹುದ್ದೆಗಳ ಬಗ್ಗೆ ನೇರ ಮಾಹಿತಿ ದೊರಕಲು Recrutement ಮನೆಯಲ್ಲಿರುವ Rejoignez-nous !(http://www.inria.fr/institut/recrutement-metiers ) ಗೆ ಹೋಗಬೇಕು. ಅದರಲ್ಲಿ ಕೆಳಗಡೆ "Offres de thèses & post-doctorats" (ಅಂದ್ರೆ Offers of PhD and Post-Doc ಅಂತ) ಎಂದು ಶೀರ್ಷಿಕೆ ಇರುವ ಭಾಗದಲ್ಲಿ Thèses (http://www.inria.fr/institut/recrutement-metiers/offres/offres-de-theses) ಎನ್ನುವ ಕೊಂಡಿಗೆ ಹೋದರೆ ತೆರೆದ PhD ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಸಿಗುತ್ತದೆ. Thèses (ಥೆಸ್) ಅಂದ್ರೆ PhD ಎಂದರ್ಥ. ಪ್ರತಿ ವರುಷ February ಸಮಯದಲ್ಲಿ ತುಂಬಾ ಉದ್ಯೋಗವಕಾಶಗಳು ಇರ್ತವೆ. ಆವಾಗ ಪುನಃ ಪುನಃ ಈ ಪುಟವನ್ನು ಸಂದರ್ಶಿಸಿ ಮಾಹಿತಿ ಪಡೆದು ಅರ್ಜಿ ಸಲ್ಲಿಸುವುದು ಒಳ್ಳೇದು. ಆ ಪುಟದಲ್ಲಿರುವ ಪಟ್ಟಿಯ ಕೊನೆಯ ಮೂರು ಮನೆಗಳಲ್ಲಿ ಆಯಾ ಸಾಲಿನ ಉದ್ಯೋಗವಕಾಶ ಯಾವ ಪ್ರದೇಶಕ್ಕೆ ಸೇರಿದ ಸಂಶೋಧನಾ ಕೇಂದ್ರ, ಯಾವ ವಿಭಾಗ ಮತ್ತು ಕೊನೆಗೆ ಯಾವ ತಂಡ ಎಂದು ತಿಳಿಸಿದ್ದಾರೆ. ಮೊದಲನೆಯ ಮನೆಯಲ್ಲಿರುವ ಕೊಂಡಿಯಮೇಲೆ ಕ್ಲಿಕ್ಕಿಸಿದಾಗ (click) ಸಿಗುವ ಪುಟದಲ್ಲಿ ಎಲ್ಲಾ ವಿವರಣೆಯೂ ದೊರಕುತ್ತದೆ. ಹೆಚ್ಚಿನ ಹುದ್ದೆಗಳ ವಿವರಣೆ ಇಂಗ್ಲಿಷ್ ನಲ್ಲಿ ಇರುತ್ತವೆ. ಆ ಪುಟದ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಬೇಕಾದ ಕೊಂಡಿ ಇರುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರ್ಥ ಮಾಡಿಕೊಳ್ಳಲು google translator (http://translate.google.com/#fr|en|) ಧಾರಾಳ ಸಾಕು.

ಏನಾದರೂ ಸಂಶಯವಿದ್ದರೆ ಟಿಪ್ಪಣಿ ಬರೆಯಿರಿ.