ಇನ್ರಿಯ (INRIA = National Institute for Research in Computer Science and Control) ಎನ್ನುವುದು ಸಂಗಣಕ ವಿಜ್ಞಾನ (computer science), ನಿಯಂತ್ರಣ ಸಿದ್ಧಾಂತ (control theory) ಹಾಗೂ ಅನ್ವಯಿಕ ಗಣಿತ (applied mathematics) ವಿಷಯಗಳಲ್ಲಿ ಸಂಶೋಧನೆ ನಡೆಸುವ ಫ್ರಾನ್ಸಿನ ಒಂದು ಸಂಸ್ಥೆ. ಅವರ ಜಾಲತಾಣ ಸಂದರ್ಶಿಸಲು ಈ ಕೊಂಡಿಯನ್ನು ಬಳಸಿ.
ಈ ಸಂಸ್ಥೆಗೆ ಫ್ರಾನ್ಸಿನ ಹಲವಾರು ಪ್ರದೇಶಗಳಲ್ಲಿ ಶಾಖೆಗಳಿವೆ. ಪ್ರತಿಯೊಂದು ಶಾಖೆಯಲ್ಲೂ ಹಲವಾರು ತಂಡಗಳು (research teams) ವಿವಿಧ ವಿಷಯಗಳಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆ ಮಾಡುತ್ತಿವೆ. ಫ್ರಾನ್ಸಿನಲ್ಲಿ ಹೆಚ್ಚಾಗಿ ಫ್ರೆಂಚ್ ಭಾಷೆಯ ಬಳಕೆ ತುಂಬಾ ಕಟ್ಟುನಿಟ್ಟಾಗಿ ಹೇರುತ್ತಿದ್ದರೂ, ಈ ಸಂಸ್ಥೆಯಲ್ಲಿ ಆಂಗ್ಲ ಭಾಷೆಯ ಬಳಕೆಗೆ ಅನುಮತಿಯಿದೆ. ಅದಲ್ಲದೆ ಇಲ್ಲಿಗೆ ಅರ್ಜಿ ಸಲ್ಲಿಸುವುದು ತುಂಬಾ ಸರಳ. ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಅಂತರ್ಜಾಲದ ಮೂಲಕ ನಿರ್ವಹಿಸಬಹುದು. GRE, TOEFL ಮೊದಲಾದ ದುಬಾರಿ ಪರೀಕ್ಷೆಗಳ ಅಗತ್ಯವೂ ಇಲ್ಲ. ಉಮೇದುವಾರರು ತಮ್ಮ ಮಂದಿಗನರಿಕೆಯನ್ನು (applicant's data = CV = biodata) ಅರ್ಜಿಸಲ್ಲಿಸುವ ಜಾಲಪುಟದಲ್ಲಿ (webpage) ನಕಲೇರಿಸಿದರೆ (upload) ಸಾಕು.
ಅರ್ಜಿ ಸಲ್ಲಿಸುವ ವಿಧಾನ
http://www.inria.fr/ ಪುಟಕ್ಕೆ ಹೋಗಿ. ಈ ಪುಟದಲ್ಲಿ ಕೆಳಗಡೆ 4 ಮನೆಗಳಿವೆ (columns). ಅವುಗಳಲ್ಲಿ ನಮಗೆ ಬೇಕಾದ್ದು ಈ ಮೂರು : Recrutement, Recherche, En région.
Recherche ಮನೆಯಲ್ಲಿ INRIA ದಲ್ಲಿ ಇರುವ research ತಂಡಗಳ (team) ಬಗ್ಗೆ ಮಾಹಿತಿ ಇದೆ. ಅದ್ಕೆ ಹೋದ್ರೆ http://www.inria.fr/
En région ಮನೆಯಲ್ಲಿ INRIA ದ ವಿವಿಧ ಸಂಶೋಧನಾ ಕೇಂದ್ರಗಳನ್ನು (research centers) ಫ್ರಾನ್ಸಿನ ವಿವಿಧ ಪ್ರದೇಶಗಳಿಗೆ ಅನುಸರಿಸಿ ವಿಂಗಡಿಸಿದ್ದಾರೆ, Bordeaux, Grenoble ಆ ಥರ. ಆ ಕೊಂಡಿಗಳಿಗೆ ಹೋದರೆ ಆಯಾ ಪ್ರದೇಶಗಳಲ್ಲಿರುವ ತಂಡಗಳ ಬಗ್ಗೆ ಮಾಹಿತಿ ಪಡೆಯಬಹುದು. ಪ್ರಾದೇಶಿಕ ಮಾಹಿತಿಯಿಂದ ತುಂಬಾ ಉಪಯೋಗ ಏನಿಲ್ಲ. ಆದ್ರೆ ಯಾವುದಾದರು ತಂಡದಲ್ಲಿ ಉದ್ಯೋಗ ಸಿಕ್ಕಿದರೆ, ಅದು ಫ್ರಾನ್ಸಿನ ಯಾವ ಭಾಗದಲ್ಲಿದೆ ಎಂದು ತಿಳಿಯಲು ಅದನ್ನು ಸಂದರ್ಶಿಸಬಹುದು.
PhD ಹುದ್ದೆಗಳ ಬಗ್ಗೆ ನೇರ ಮಾಹಿತಿ ದೊರಕಲು Recrutement ಮನೆಯಲ್ಲಿರುವ Rejoignez-nous !(http://www.inria.fr/
ಏನಾದರೂ ಸಂಶಯವಿದ್ದರೆ ಟಿಪ್ಪಣಿ ಬರೆಯಿರಿ.
No comments:
Post a Comment